ಗಜೇಂದ್ರಮೋಕ್ಷ

Auto-scrollSpeed 3

Touch the screen or press any key to pause.

Reading settings

Text size
Show
Layout (wide screens)
Line spacing
  1. ನಾರಾಯಣಾಯ ನಮೋ ನಾಗೇಂದ್ರಶಯನಾಯ ನಾರದಾದ್ಯಖಿಳ ಮುನಿನಮಿತ ಚರಣಾಂಭೋಜ ಸಾರಿದರೆ ಪೊರೆದ ಕಂಸಾರಿ ರಕ್ಷಿಪುದಿಂದು ಕಾರುಣ್ಯದಿಂದ ಒಲಿದು || ಪ ||

  2. ಪಾಂಡ್ಯ ದೇಶದೊಳು ಇಂದ್ರದ್ಯುಮ್ನನೆಂಬ ಭೂ ಮಂಡಲಾಧಿಪನು ವೈರಾಗ್ಯದಲಿ ಹರಿಪಾದ ಪುಂಡರೀಕದ ಧ್ಯಾನದಿಂ ಮಹಾತಪದೊಳಿರೆ ಚಂಡತಾಪಸ ಅಗಸ್ತ್ಯ | ಹಿಂಡು ಶಿಷ್ಯರವೆರಸಿ ಬರಲು ಸತ್ಕರಿಸದಿರೆ ಕಂಡು ಗಜಯೋನಿಯಲಿ ಜನಿಸು ಹೋಗೆನುತ ಉ ದ್ದಂದಡ ಶಾಪವನಿಟ್ಟು ಮುನಿ ಪೋದನಾಕ್ಷಣದಿ ಶುಂಡಾಲನಾದಸರಸ || ೧ ||

  3. ಕ್ಷೀರಸಾಗರತಡಿಯ ಐದು ಯೋಜನದ ವಿ ಸ್ತಾರದಲಿ ವರತ್ರಿಕೂಟಾದ್ರಿ ಶೃಂಗತ್ರಯದ ರಾರಾಜಿಸುತಲಿಪ್ಪರಜತ ತಾಮ್ರ ಧ್ವಜದ ಮೇರುಸಮ ಗಾಂಭೀರ್ಯದಿ | ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ ಸೌರಭದೊಳಶ್ವತ್ಥಪೂಗ ಪುನ್ನಾಗ ಜಂ ಬೀರಾದಿ ತರುಗಲ್ಮ ಖಗ ಮೃಗಗಳೆಸೆವಲ್ಲಿ ವಾರಣೇಂದ್ರನು ಮೆರೆದನು || ೨ ||

  4. ಆನೆ ಹೆಣ್ಣಾನೆ ಮರಿಯಾನೆಗಳ ಸಹಿತ ಆ ಕಾನನದಿ ನಲಿಯುತ್ತ ಬೇಸಿಗೆಯ ಬಿಸಿಲಿನಲಿ ತಾ ನೀರಡಿಸಿ ಬಂದುದೊಂದು ಸರಸಿಗೆ ಸಲಿಲಪಾನಾಭಿಲಾಷೆಯಿಂದ | ನಾನಾ ಪ್ರಕಾರದಲಿ ಜಲಕ್ರೀಡೆಯಾಡುತಿರೆ ಏನಿದೆತ್ತಣ ರಭಸನಂದುಗ್ರ ಕೋಪದಿಂ ದಾ ನೆಗಳು ಬಾಯ್ತೆರೆದು ನುಂಗಿಕೊಂಡಂಘ್ರಿಯನು ಏನೆಂಬೆನಾಕ್ಷಣದೊಳು || ೩ ||

  5. ಒತ್ತಿ ಹಿಡಿದೆಳೆಯುತಿರೆ ಎತ್ತಣದಿದೇನೆನುತ ಮತ್ತಗಜರಾಜ ಅವುಡೊತ್ತಿ ಫೀಳಿಡುತಲೆಳ ದೊತ್ತಿ ತಂದುದು ದಡಕೆ ಮತ್ತೆ ನಡುಮಡುವಿನೊಳಗೆತ್ತೆಳೆದುದಾ ನೆಗಳವು | ಇತ್ತಂಡವಿತ್ತು ಕಾದಿತ್ತು ಸಾವಿರವರುಷ ವಿಸ್ತರಿಸಿತ್ತೇನೆಂಬೆ ಮತ್ತಾ ಗಜೇಂದ್ರಂಗೆ ಸತ್ವ ತಗ್ಗಿತು ತನ್ನ ಚಿತ್ತದೊಳು ಧ್ಯಾನಿಸುತ ಮತ್ತಾರು ಗತಿಯನುತಲಿ || ೪ ||

  6. ಬಂದುದಾ ಸಮಯದಲಿ ಹಿಂದೆ ಮಾಡಿದ ಸುಕೃತ ದಿಂದ ದಿವ್ಯ ಜ್ಞಾನ ಕಣ್ದೆರದು ಕೈ ಮುಗಿದು ವಂದಿಸಿದ ಮನದೊಳರವಿಂದನಾಭಾಚ್ಯುತ ಮುಕುಂದ ಮುನಿವೃಂದವಂದ್ಯ | ಇಂದಿರಾರಮಣ ಗೋವಿಂದ ಕೇಶವ ಭಕ್ತ ಬಂಧು ಕರುಣಾಸಿಂಧು ತಂದೆ ನೀ ಸಲಹೆನ್ನ ಬಂದು ಸಿಲುಕಿದೆನು ಬಲು ದುಂದುಗದ ಮಾಯಾಪ್ರಬಂಧದಿಂ ನೆಗಳಿನಿಂದ || ೫ ||

  7. ಪರಮಾತ್ಮ ಪರಿಪೂರ್ಣ ಪರಮೇಶ ಪರತತ್ತ್ವ ಪರತರ ಪರಂಜ್ಯೋತಿ ಪರಮಪಾವನಮುರ್ತಿ ಉರುತರಾ ಪರಬ್ರಹ್ಮ ಆನಂದ ಪರಮೇಷ್ಠಿ ಪರಾತ್ಪರ ಪರಮಪುರುಷ | ನಿರುಪಮ ನಿಜಾನಂದ ನಿರ್ಭಯ ನಿರಾವರಣ ನಿರವಧಿಕ ನಿರ್ಗುಣ ನಿರಂಜನ ನಿರಾಧಾರ ನಿರವೇದ್ಯ ನಿಸ್ಸಂಗ ನಿಶ್ಚಿಂತ್ಯ ನಿತ್ಯನೇ ನೋಯುಸದೆ ಸಲಹೆನ್ನನು || ೬ ||

  8. ಇಂತೆನುತ ಮೋರ್ಛೆಯಲಿ ಗುಪಿತ ಕಂಠಧ್ವನಿಯೊ ಳಂತರಾತ್ಮಕನ ನೆನೆಯುತ್ತಳುತ್ತಿರಲಿತ್ತ ನಂತ ಮಹಿಮನು ಕೇಳಿ ಕರುಣದಿಂದಾಕ್ಷಣಾನಂತಶಯನದಲೆದ್ದನು | ಸಂತಪಿಸಿ ಸಿರಿಮುಡಿಯು ಗರುಡವಾಹನನಾಗಿ ಚಿಂತೆ ಬೇಡೇಳೆನುತ ಅಭಯಹಸ್ತವನಿತ್ತೇ ಕಾಂತ ಭಕ್ತನ ಬಳಗೆ ಬಂದೆರಡು ಕೈಯಿಂದ ದಂತಿವರನನು ನೆಗಹಿದ || ೭ ||

  9. ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ ಉಗುವ ಕರುಣದಲಿ ಮೈದಡಹಲ್ಕಿ ಗಜ ಜನ್ಮ ತೆಗದುದಾಕ್ಷಣದಿ ಮಣಿಮಕರಕುಂಡಲದಿಂದ ಮಿಗೆ ಶೋಭಿಸುತಲೆಸೆದನು | ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ ಮಿಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ ಅಘಹರನ ಕಂಡು ನಿಜಗತಿಗೈದುದಮರರೋಳ್ ಮಿಗೆ ಮೆರದುದೋಲೈಸುತ || ೮ ||

  10. ಮಣಿಮಯ ಕಿರೀಟಕುಂಡಲ ಹಾರಕೌಸ್ತುಭದ ಮಿನುಗುತಿಹ ವೈಜಯಂತಿಯ ಭೂಷಣಾಂಗದ ಹಣೆಯ ಕಸ್ತೂರಿತಿಲಕ ನಾಮದಿಂದಸೆವುತಿಹ ವರ ಶಂಖ ಚಕ್ರದಿಂದ | ಝಣಝಣಿತ ನೂಪುರದ ದಂತ ಪಂಕ್ತಿಯ ಕೃಪೇ ಕ್ಷಣದ ಸಿರಿಮೋಗದ ಪೀತಾಂಬರಾಲಂಕೃತದ ಮಣಿದಾ ಜಯ ಜಯವೆಂಬ ಸುರಸಿದ್ಧಸಾಧ್ಯ ಸಂದಣಿಯೊಳಗೆ ಹರಿ ಮೆರೆದನು || ೯ ||

  11. ಹರಿಸ್ತುತಿಯ ಗೈದಂಘ್ರಿಕೆರಗಲಾ ಭೂಪನಾ ದರದಿಂದ ಸತ್ಕರಿಸಿ ಶರಧಿ ಶ್ವೇತದ್ವೀಪ ಗಿರಿಶೃಂಗ ವಾರಾಶಿ ತರುಶೇಷ ವಾಲ್ಮೀಕಿಮುನಿ ಧರಣಿ ಧ್ರುವ ಲಕ್ಷ್ಮಿಯು | ಹರ ಗಿರಿಜೆ ವಿಧಿವಾಣಿ ನಾರದ ಪ್ರಹ್ಲಾದ ಗರುಡ ಗೋ ವಿಪ್ರ ಋಷಿ ಗಂಗಾರ್ಕ ಚಂದ್ರಾಗ್ನಿ ಸಿರಿವತ್ಸ ಶಂಖ ಚಕ್ರಾದಿಯವತಾರಗಳ ಸ್ಮರಿಸುವರ ಕಾಯ್ದೆನೆಂದ || ೧೦ ||

  12. ಅವನಿದನುದಯಕಾಲದೊಳೆದ್ದು ನಿಜ ಭಕ್ತಿ ಭಾವಶುದ್ಧಗಳಿಂದ ಪೇಳಿ ಕೇಳುವ ಜನರ ಘಾವಳಿಯ ಪರಿಹರಿಸಿ ಸುಜ್ಞಾನ ಪದವಿತ್ತು ದೇಹಾವಸಾನದೊಳಗೆ | ಶ್ರೀ ವಾಸುದೇವನಾಜ್ಞಾಪಿಸಿ ಗಜೇಂದ್ರ ಸಹಿ ತಾ ವಿಹಂಗಾಧಿಪನನೇರಿ ವೈಕುಂಠಕ್ಕೆ ದೇವ ಬಿಜಯಂಗೈದ ಶ್ರೀಹರಿ ಪುರಂದರವಿಠಲನು || ೧೧ || || ಶ್ರೀಕೃಷ್ಣಾರ್ಪಣಮಸ್ತು ||

Roman transliteration (IAST)

Automatic transliteration.

  1. nārāyaṇāya namo nāgeṃdraśayanāya nāradādyakhil̤a muninamita caraṇāṃbhoja sāridarè pòrèda kaṃsāri rakṣipudiṃdu kāruṇyadiṃda òlidu || pa ||

  2. pāṃḍya deśadòl̤u iṃdradyumnanèṃba bhū maṃḍalādhipanu vairāgyadali haripāda puṃḍarīkada dhyānadiṃ mahātapadòl̤irè caṃḍatāpasa agastya | hiṃḍu śiṣyaravèrasi baralu satkarisadirè kaṃḍu gajayoniyali janisu hogènuta u ddaṃdaḍa śāpavaniṭṭu muni podanākṣaṇadi śuṃḍālanādasarasa || 1 ||

  3. kṣīrasāgarataḍiya aidu yojanada vi stāradali varatrikūṭādri śṛṃgatrayada rārājisutalipparajata tāmra dhvajada merusama gāṃbhīryadi | pārijātāṃbhoja tul̤asi malligè jāji saurabhadòl̤aśvatthapūga punnāga jaṃ bīrādi tarugalma khaga mṛgagal̤èsèvalli vāraṇeṃdranu mèrèdanu || 2 ||

  4. ānè hèṇṇānè mariyānègal̤a sahita ā kānanadi naliyutta besigèya bisilinali tā nīraḍisi baṃdudòṃdu sarasigè salilapānābhilāṣèyiṃda | nānā prakāradali jalakrīḍèyāḍutirè enidèttaṇa rabhasanaṃdugra kopadiṃ dā nègal̤u bāytèrèdu nuṃgikòṃḍaṃghriyanu enèṃbènākṣaṇadòl̤u || 3 ||

  5. òtti hiḍidèl̤èyutirè èttaṇadidenènuta mattagajarāja avuḍòtti phīl̤iḍutalèl̤a dòtti taṃdudu daḍakè mattè naḍumaḍuvinòl̤agèttèl̤èdudā nègal̤avu | ittaṃḍavittu kādittu sāviravaruṣa vistarisittenèṃbè mattā gajeṃdraṃgè satva taggitu tanna cittadòl̤u dhyānisuta mattāru gatiyanutali || 4 ||

  6. baṃdudā samayadali hiṃdè māḍida sukṛta diṃda divya jñāna kaṇdèradu kai mugidu vaṃdisida manadòl̤araviṃdanābhācyuta mukuṃda munivṛṃdavaṃdya | iṃdirāramaṇa goviṃda keśava bhakta baṃdhu karuṇāsiṃdhu taṃdè nī salahènna baṃdu silukidènu balu duṃdugada māyāprabaṃdhadiṃ nègal̤iniṃda || 5 ||

  7. paramātma paripūrṇa parameśa paratattva paratara paraṃjyoti paramapāvanamurti urutarā parabrahma ānaṃda parameṣṭhi parātpara paramapuruṣa | nirupama nijānaṃda nirbhaya nirāvaraṇa niravadhika nirguṇa niraṃjana nirādhāra niravedya nissaṃga niściṃtya nityane noyusadè salahènnanu || 6 ||

  8. iṃtènuta morchèyali gupita kaṃṭhadhvaniyò l̤aṃtarātmakana nènèyuttal̤uttiralitta naṃta mahimanu kel̤i karuṇadiṃdākṣaṇānaṃtaśayanadalèddanu | saṃtapisi sirimuḍiyu garuḍavāhananāgi ciṃtè beḍel̤ènuta abhayahastavanitte kāṃta bhaktana bal̤agè baṃdèraḍu kaiyiṃda daṃtivarananu nègahida || 7 ||

  9. nègal̤a bāyanu cakradali sīl̤i karivarana uguva karuṇadali maidaḍahalki gaja janma tègadudākṣaṇadi maṇimakarakuṃḍaladiṃda migè śobhisutalèsèdanu | vigaḍa devala ṛṣiya śāpadali biddil̤ègè migè nakranāgi hūhū èṃba gaṃdharva aghaharana kaṃḍu nijagatigaidudamararol̤ migè mèradudolaisuta || 8 ||

  10. maṇimaya kirīṭakuṃḍala hārakaustubhada minugutiha vaijayaṃtiya bhūṣaṇāṃgada haṇèya kastūritilaka nāmadiṃdasèvutiha vara śaṃkha cakradiṃda | jhaṇajhaṇita nūpurada daṃta paṃktiya kṛpe kṣaṇada sirimogada pītāṃbarālaṃkṛtada maṇidā jaya jayavèṃba surasiddhasādhya saṃdaṇiyòl̤agè hari mèrèdanu || 9 ||

  11. haristutiya gaidaṃghrikèragalā bhūpanā daradiṃda satkarisi śaradhi śvetadvīpa giriśṛṃga vārāśi taruśeṣa vālmīkimuni dharaṇi dhruva lakṣmiyu | hara girijè vidhivāṇi nārada prahlāda garuḍa go vipra ṛṣi gaṃgārka caṃdrāgni sirivatsa śaṃkha cakrādiyavatāragal̤a smarisuvara kāydènèṃda || 10 ||

  12. avanidanudayakāladòl̤èddu nija bhakti bhāvaśuddhagal̤iṃda pel̤i kel̤uva janara ghāval̤iya pariharisi sujñāna padavittu dehāvasānadòl̤agè | śrī vāsudevanājñāpisi gajeṃdra sahi tā vihaṃgādhipananeri vaikuṃṭhakkè deva bijayaṃgaida śrīhari puraṃdaraviṭhalanu || 11 || || śrīkṛṣṇārpaṇamastu ||

How to use this page
  1. Tap Kirtan for large text that keeps the screen awake. Press Start to scroll while you sing; touch the screen to pause.

  2. Tap Aa to change the text size and line spacing, or to show both, lyrics only or translation only. Your choice is remembered.

  3. Under Read in, pick a script to read the same text in Devanagari, Bengali, Tamil, Telugu and more.

  4. Compare shows the lyrics side by side in two scripts, such as Devanagari and Roman, verse by verse. Choose any script or a translation for each column; on songs and prayers, Show meaning adds the meaning under each verse.

  5. Tap Save to keep this page under Your songs on the home page. Pages you open appear there too, on this device only.

  6. Share sends a link to this page. PDF makes a clean sheet without menus, to save or print.

  7. At the end, Previous and Next take you through the list in order.

All tips

Text: Kannada Wikisource: ಗಜೇಂದ್ರಮೋಕ್ಷ (Wikisource contributors (see the page history)),CC BY-SA 4.0, retrieved 2026-10-26. Other scripts and the Roman transliteration are generated automatically.